ಸುಳ್ಯ: ಬಿಲ್ಲವ ಜವನೆರ್ ಸುಳ್ಯ ಇದರ ವತಿಯಿಂದ ಏಪ್ರಿಲ್ 19ರ ಭಾನುವಾರದಂದು ಕೊಡಿಯಾಲಬೈಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ‘ಬಿಲ್ಲವ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

​ಈ ರೋಚಕ ಕ್ರೀಡಾಕೂಟದಲ್ಲಿ ತಾಲೂಕಿನ ಒಟ್ಟು 66 ಬಿಲ್ಲವ ಯುವಕರನ್ನೊಳಗೊಂಡ 6 ಬಲಿಷ್ಠ ತಂಡಗಳು ಪಾಲ್ಗೊಂಡು, ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದವು.

ಅಂತಿಮ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಂಗಮ ಕ್ರಿಕೆಟರ್ಸ್ ಅಲಂಗಾರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡರೆ, ಅತ್ಯುತ್ತಮ ಹೋರಾಟ ನೀಡಿದ ಬಿಲ್ಲವ ಪ್ಯಾಂಥರ್ಸ್ ಸುಳ್ಯ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *